Index   ವಚನ - 1506    Search  
 
ಮಸಣವೈರಾಗ್ಯರು ಲಕ್ಷ ಲಕ್ಷ, ಪುರಾಣವೈರಾಗ್ಯರು ಲಕ್ಷ ಲಕ್ಷ, ಪ್ರಸೂತಿವೈರಾಗ್ಯರು ಲಕ್ಷ ಲಕ್ಷ, ಪಿತ್ತವೈರಾಗ್ಯರು ಲಕ್ಷ ಲಕ್ಷ, ಸ್ವಯಾನುಭಾವ ಸಮ್ಯಕ್‍ಜ್ಞಾನ ವೈರಾಗ್ಯರನೊಬ್ಬರನೂ ಕಾಣೆ, ಕೂಡಲಚೆನ್ನಸಂಗಮದೇವಾ.