Index   ವಚನ - 1518    Search  
 
ಮಾಡುವಲ್ಲಿ ಎನ್ನ ನಾನು ಅರೆಯಿತ್ತು ಮಾಡಿದೆನಾದಡೆ, ನೀಡುವಲ್ಲಿ ಎನ್ನ ನಾನು ಅರೆಯಿತ್ತು ನೀಡಿದೆನಾದಡೆ, [ಉಣಿಸುವಲ್ಲಿ] ಎನ್ನ ನಾನು ರುಚಿಗೆ ಹಾರೈಸಿದೆನಾದಡೆ ನಿಮಗಂದೇ ದ್ರೋಹಿಯಯ್ಯಾ! ಮಾಡುವಲ್ಲಿ ನೀಡುವಲ್ಲಿ [ಉಣಿಸುವಲ್ಲಿ] ಕೂಡೆ ಶುದ್ಧನಲ್ಲದಡೆ ನೀನಂದೆ ಮೂಗ ಕೊಯ್ಯಾ ಕೂಡಲಚೆನ್ನಸಂಗಮದೇವಾ.