ಮಾಹೇಶ್ವರಂಗೆ ಅಪ್ಪುವೆ ಅಂಗ,
ಆ ಅಂಗಕ್ಕೆ ಸುಬುದ್ಧಿಯೆ ಹಸ್ತ
ಆ ಹಸ್ತಕ್ಕೆ ಕರ್ತೃಸಾದಾಖ್ಯ, ಆ ಸಾದಾಖ್ಯಕ್ಕೆ ಜ್ಞಾನಶಕ್ತಿ,
ಆ ಶಕ್ತಿಗೆ ಗುರುಲಿಂಗ, ಆ ಲಿಂಗಕ್ಕೆ ಪ್ರತಿಷ್ಠೆಯ ಕಳೆ,
ಆ ಕಳೆಗೆ ಜಿಹ್ವೇಂದ್ರಿಯವೆ ಮುಖವು,
ಆ ಮುಖಕ್ಕೆ ಸುರಸದ್ರವ್ಯಂಗಳ ರೂಪು-ರುಚಿ
ತೃಪ್ತಿಯನರಿದು ನೈಷ್ಠಿಕ ಭಕ್ತಿಯಿಂದರ್ಪಿಸಿ,
ಸುಪ್ರಸಾದವ ಭೋಗಿಸಿ ಸುಖಿಸುತ್ತಿಹೆನು
ಕೂಡಲಚೆನ್ನಸಂಗಾ ನಿಮ್ಮ ಮಾಹೇಶ್ವರ.