Index   ವಚನ - 1526    Search  
 
ಮಿಂಚು ಮಿಂಚಿದಡೆ, ಮಿಂಚಿನಲುಳ್ಳ ಪ್ರಯೋಗವನಾಕ್ಷಣವೆ ಪ್ರಯೋಗಿಸಬೇಕು. ಇಂದ್ರಚಾಪ ತೋರಿದಡೆ ಇಂದ್ರಚಾಪದಲುಳ್ಳ ಪ್ರಯೋಗವನಾಕ್ಷಣವೆ ಪ್ರಯೋಗಿಸಬೇಕು. ಮಹಾನುಭಾವಿಗಳು ಮನದೆರೆದು ಮಾತನಾಡಿದಡೆ ಅನುಭಾವದೊಳಗುಳ್ಳ ಪ್ರಯೋಗವನಾಕ್ಷಣವೆ ಪ್ರಯೋಗಿಸಬೇಕು. ಕೂಡಲಚೆನ್ನಸಂಗಯ್ಯನಲ್ಲಿ ಸ್ವಾಯತವಾದ ಶರಣರು ಸ್ವೇಚ್ಛಾಪರರು.