Index   ವಚನ - 1533    Search  
 
ಮೂರು ಗ್ರಾಮದ ಪಟ್ಟಣಕ್ಕೆ ಪಂಚನಾಯಕರ ಕಾಹು. ಅವರ ಸಂಚವಿಡಿದು ಲಿಂಗಾರ್ಚನೆಯ ಮಾಡಿದಡೆ ಲೋಕದ ಬಳಕೆ ಕಂಡಯ್ಯಾ. ಐವರ ಪಂಚಸ್ಥಳವಳಿದು ಏಕಸ್ಥಳವಾಗಿ ನವನಾಳಭೇದದ ಪರಿಯನರಿದಡೆ ಕೂಡಲಚೆನ್ನಸಂಗಯ್ಯನೊಬ್ಬನೆ.