Index   ವಚನ - 1534    Search  
 
ಮೂರು ಲೋಕದವರ ನಿದ್ರಾಂಗನೆ ಹೀರಿ ಹಿಂಡಿ ಪ್ರಾಣಕಾರ್ಪಣ್ಯವ ಮಾಡಿ ತಟ್ಟುಗೆಡಹಿದಳು. ಇವಳ ಗೆಲುವವರ ಆರನೂ ಕಾಣೆ, ಇವಳ ಬಾಣಕ್ಕೆ ಗುರಿಯಾಗಿ ಏಳುತ್ತ ಬೀಳುತ್ತ ಐದಾರೆ ಕೂಡಲಚೆನ್ನಸಂಗಮದೇವಾ.