Index   ವಚನ - 1535    Search  
 
ಮೃದು ಕಠಿಣ ಶೀತ ಉಷ್ಣ ಸ್ಪರ್ಶನ ಅಂಗಸೋಂಕೆಲ್ಲಾ ಲಿಂಗಸೋಂಕು. ಅಂಗ ಲಿಂಗ ಸಂಬಂಧವಾದ ಬಳಿಕ ಎನ್ನ ಘ್ರಾಣ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ ಮುಂತಾದ ಪಂಚವಿಷಯದಲ್ಲಿ ತಟ್ಟುವ ಪಂಚದ್ರವ್ಯವೆಲ್ಲಕ್ಕೂ ನೀನಲ್ಲದೆ ನಾನೆಂಬುದಿಲ್ಲ. ಕೂಡಲಚೆನ್ನಸಂಗಯ್ಯಾ, ಎನ್ನಂಗಸೋಂಕೆಲ್ಲ, ಶಬ್ದಸ್ಪರ್ಶರೂಪುರಸಂಗಂಧವೆಲ್ಲ ನಿನ್ನ ಪೂಜೆಯಲ್ಲದೆ ಬೇರನ್ಯವಿಷಯ ಸೋಂಕಿಲ್ಲ.