Index   ವಚನ - 1543    Search  
 
ರಜದ ನಿಜದ ಭುಜದ ಗಜದ ಸದದ ಇವೆಲ್ಲವನು ಕೊಂಡು ಹೋಗಿ, ಮಡಿವಾಳನೆಂದು ಒಗೆಯ ಹಾಕಿದೆನು. ಒಗೆಯ ಹಾಕಿದಡೆ, ಗುರುಮೂರ್ತಿಯ ನಷ್ಟವ ಬಿಳಿದು ಮಾಡಿದನು. ಲಿಂಗಸಾರಾಯಸ್ವರೂಪವ ಬಿಳಿದು ಮಾಡಿದನು, ಜಂಗಮಸಾರಾಯಸ್ವರೂಪವ ಬಿಳಿದು ಮಾಡಿದನು, ಅಗ್ನಿಯಿಲ್ಲದ ಪಾಕದ ಪದಾರ್ಥವ ಲಿಂಗವಿಲ್ಲದೆ ಅರ್ಪಿಸಿದನು; ಜಂಗಮವಿಲ್ಲದೆ ನೀಡಿದನು, ಪ್ರಸಾದವಿಲ್ಲದೆ ಗ್ರಹಿಸಿದನು. ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣ, ಮಡಿವಾಳನೆಂಬ ಪ್ರಸಾದ ಎನಗಳವಟ್ಟಿತ್ತು.