Index   ವಚನ - 1544    Search  
 
ರವಿ ದೀಕ್ಷೆ[ಯಿಂ] ಮೋಕ್ಷವ ಪಡೆದೇನೆಂದು ಹಾವಿನಾಶ್ರಯಕ್ಕೊಳಗಾದ. ಹರಿ ದೀಕ್ಷೆ[ಯಿಂ]ಮೋಕ್ಷವ ಪಡೆದೇನೆಂದು ಹಲವು ಪ್ರಳಯಕ್ಕೊಳಗಾದ ಮೈಲಾರ ದೀಕ್ಷೆ[ಯಿಂ]ಮೋಕ್ಷವ ಪಡೆದೇನೆಂದು ನಾಯಿಯಾದ. ಬೈರವ ದೀಕ್ಷೆ[ಯಿಂ]ಮೋಕ್ಷವ ಪಡೆದೇನೆಂದು ಭೂತನಾದ. ಇಂತು ಚತುರ್ವೇದ ಸಾರುತ್ತಿರಲು ಜಂಗಮವೆ ಲಿಂಗವೆಂದು ಇಹಪರಕ್ಕೆ ಸಾಧನ ಮಾಡಿಕೊಂಡರು ಕೂಡಲಚೆನ್ನಸಂಗಮದೇವಾ ನಮ್ಮ ಶರಣರು.