Index   ವಚನ - 1546    Search  
 
ರೂಪಚಕ್ರ ನಯನದಿಂದೆ ನಡೆವುದು, ಶಬ್ದಚಕ್ರ ಶ್ರೋತ್ರದಿಂದೆ ನಡೆವುದು. ಸೌರಭಚಕ್ರ ಘ್ರಾಣದಿಂದೆ ನಡೆವುದು, ರುಚಿಚಕ್ರ ಜಿಹ್ವೆಯಿಂದ ನಡೆವುದು, ಸ್ಪರ್ಶಚಕ್ರ ತ್ವಕ್ಕಿನಿಂದ ನಡೆವುದು. ಈ ಐದರಿಂದ ನಡೆವುದು ಲೋಕಾದಿಲೋಕಂಗಳೆಲ್ಲ. ರೂಹಿಗೆ ಕೆಟ್ಟು ಹೋದರು, ಈ ಐದರ ಕಥನದಲ್ಲಿ, ಈ ಸಂಸಾರವೆಂಬ ವಿಧಿಯ ಕೈಯಲ್ಲಿ ಹರಿಬ್ರಹ್ಮಾಸುರರು ಮೊದಲಾದವರೆಲ್ಲರು ಕೆಟ್ಟುಹೋದರು ನೋಡಾ ಕೂಡಲಚೆನ್ನಸಂಗಮದೇವಾ.