Index   ವಚನ - 1555    Search  
 
ಲಯ ಗಮನ ಶೂನ್ಯವಾಗಿರ್ಪುದು ಶಿವಲಿಂಗ ತಾನೆ ನೋಡಾ! ಕೇವಲ ನಿಷ್ಕಲರೂಪವಾಗಿರ್ಪುದು ಪರತರ ಪರಬ್ರಹ್ಮ ತಾನೆ ನೋಡಾ! ಭಕ್ತನ ಕರಕಂಜದಲ್ಲಿ ಖಂಡಿತಾಕಾರದಿಂದ ರೂಪುಗೊಂಡಿರ್ದು ಅನಿಷ್ಟವ ಕಳೆದು ಇಷ್ಟಾರ್ಥವನೀವುದು ಪರವಸ್ತು ನೋಡಾ ಕೂಡಲಚೆನ್ನಸಂಗಮದೇವಾ, ನಿಮ್ಮ ಒಲವು.