Index   ವಚನ - 1557    Search  
 
ಲಿಂಗಕಲ್ಲದೆ ಇಂಬುಗೊಡೆನು, ಎನ್ನ ಮನವ. ಜಂಗಮಕಲ್ಲದೆ ಇಂಬುಗೊಡೆನು, ಎನ್ನ ಧನವ. ಪ್ರಸಾದಕಲ್ಲದೆ ಇಂಬುಗೊಡೆನು, ಎನ್ನ ಜಿಹ್ವೆಯ. ಸಕಲ ಇಂದ್ರಿಯಂಗಳನು ತ್ರಿವಿಧದಲ್ಲಿಯೆ ತಂದು ನಿಲ್ಲಿಸುವೆನು. ಕೂಡಲ ಚೆನ್ನಸಂಗಮದೇವರಪ್ಪಯಿಸಿಪ್ಪ ಕಾರಣದಿಂದ ಎನ್ನರಿವ ಅನ್ಯರಿಗೆ ಬೀಯಮಾಡಲಾರೆನು.