Index   ವಚನ - 1558    Search  
 
ಲಿಂಗಕ್ಕೀಯದೆ ಅಂಗಸುಖಕ್ಕಾಗಿ ಅನ್ನೋದಕವ ಕೊಂಡ ಅಜ್ಞಾನಿಯನೇನೆಂದು ನುಡಿವೆನಯ್ಯಾ? ಆತನು ಪತಿತನಾಗಿ ನರಕದಲ್ಲಿ ಹೊರಳುತ್ತಿರ್ಪನು. "ಅಸಮರ್ಪ್ಯ ಪ್ರಾಣಲಿಂಗೇ ಜಲಂ ವಾ ಫಲಮೇವ ವಾ| ಸ್ವೀಕುರ್ಯಾದ್ಯದಿ ಮೋಹೇನ ಪತಿತೋ ನರಕಂ ವ್ರಜೇತ್"|| ಎಂದುದಾಗಿ, ಆವ ಪದಾರ್ಥವನಾದಡೆಯು ಲಿಂಗಕ್ಕೆ ಕೊಡದೆ ಕೊಳಲಾಗದೆಂದುದು ನಮ್ಮ ಕೂಡಲಚೆನ್ನಸಂಗಯ್ಯನ ವಚನ.