Up
ಶಿವಶರಣರ ವಚನ ಸಂಪುಟ
  
ಚನ್ನಬಸವಣ್ಣ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Index
 
ವಚನ - 1563 
Search
 
ಲಿಂಗಜಂಗಮ ಜಂಗಮಲಿಂಗದ ಮುಖವ ನೀವಲ್ಲದೆ ಇನ್ನು ಬಲ್ಲವರಾರಯ್ಯಾ? ಅಂಗದ ಮೇಲೆ ಲಿಂಗವುಳ್ಳುದೆಲ್ಲವೂ ಸಂಗಮನಾಥನೆಂದಲ್ಲಿ ಪರವಾದಿ ಬಿಜ್ಜಳನು ಒರೆದು ನೊಡಲೆಂದಟ್ಟಿದಡೆ ಹಗರಣಿಗರ ಜಂಗಮಮುಖದಲ್ಲಿ ಲಿಂಗವ ಮಾಡಿದವರಾರು ಹೇಳಾ ನೀವಲ್ಲದೆ? ಮರದ ಮಾನಿಸನ ಕರೆದು `ಓ' ಎನಿಸಿ ನುಡಿಸಿ ಉಡಿಸಿ ಉಣಿಸಿ ಜಂಗಮಲಿಂಗಪ್ರಾಣಿ ಬಸವಣ್ಣನೆಂಬ ಧ್ವಜವನೆತ್ತಿ ಮೆರೆದವರಾರು ಹೇಳಾ ಈ ಕಲ್ಯಾಣದಲ್ಲಿ ನೀವಲ್ಲದೆ? ಜಂಗಮಮುಖಲಿಂಗವನರಿಯೆನೆಂದು ಎನ್ನ ಮನಕ್ಕೆ ಸಂದೇಹವನೊಡ್ಡಿ ಜಾರಿದಡೆ ನಾನು ಸೈರಿಸಬಲ್ಲೆನೆ? ನೀನು ಜಂಗಮಮುಖಲಿಂಗಸಂಬಂಧಿ ಎಂಬುದ ಕೇಳಿ ಆದಿಗಣನಾಥನು ಅಲ್ಲಮಪ್ರಭುವೆಂಬ ನಾಮವ ಧರಿಸಿ ನಿನ್ನನರಿಸಿಕೊಂಡು ಬರುತ್ತಲೈದಾನೆ. ಕೂಡಲಚೆನ್ನಸಂಗಮದೇವರು ಸಾಕ್ಷಿಯಾಗಿ, ಸಂಗನಬಸವಣ್ಣಾ, ನೀನೇ ಜಂಗಮಪ್ರಾಣಿಯೆಂದು ನಾನು ನಂಬಿದೆನು.
Art
Manuscript
Music
Your browser does not support the audio tag.
Courtesy:
Video
Transliteration
Liṅgajaṅgama jaṅgamaliṅgada mukhava nīvallade innu ballavarārayyā? Aṅgada mēle liṅgavuḷḷudellavū saṅgamanāthanendalli paravādi bijjaḷanu oredu noḍalendaṭṭidaḍe hagaraṇigara jaṅgamamukhadalli liṅgava māḍidavarāru hēḷā nīvallade? Marada mānisana karedu `ō' enisi nuḍisi uḍisi uṇisi jaṅgamaliṅgaprāṇi basavaṇṇanemba dhvajavanetti meredavarāru hēḷā ī kalyāṇadalli nīvallade? Jaṅgamamukhaliṅgavanariyenendu Enna manakke sandēhavanoḍḍi jāridaḍe nānu sairisaballene? Nīnu jaṅgamamukhaliṅgasambandhi embuda kēḷi ādigaṇanāthanu allamaprabhuvemba nāmava dharisi ninnanarisikoṇḍu baruttalaidāne. Kūḍalacennasaṅgamadēvaru sākṣiyāgi, saṅganabasavaṇṇā, nīnē jaṅgamaprāṇiyendu nānu nambidenu.
Hindi Translation
English Translation
Tamil Translation
Telugu Translation
Urdu Translation
ಸ್ಥಲ -
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನ
Transliteration
Comment
None
ವಚನಕಾರ ಮಾಹಿತಿ
×
ಚನ್ನಬಸವಣ್ಣ
ಅಂಕಿತನಾಮ:
ಕೂಡಲಚೆನ್ನಸಂಗಮದೇವ
ವಚನಗಳು:
1762
ಕಾಲ:
12ನೆಯ ಶತಮಾನ
ಕಾಯಕ:
ಅನುಭಾವಿಗಳು ಬರೆದ ವಚನಗಳ ಪರಾಮರ್ಶೆ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಕಪ್ಪಡಿ ಸಂಗಮ, ಹುನುಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಕಾರ್ಯಕ್ಷೇತ್ರ:
ಕಲ್ಯಾಣ, ಬೀದರ್ ಜಿಲ್ಲೆ.- ಉಳವಿ, ಜೊಯಿಡಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ.
ತಂದೆ:
ಶಿವದೇವ (ಶಿವಸ್ವಾಮಿ)
ತಾಯಿ:
ನಾಗಲಾಂಬಿಕೆ(ಅಕ್ಕನಾಗಮ್ಮ)
ಐಕ್ಯ ಸ್ಥಳ:
ಉಳವಿ, ಜೊಯಿಡಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ.
ವಚನ ತಿದ್ದುಪಡಿ
×
ವಚನ ಪದಪ್ರಯೋಗ ಕೋಶ
×
ಪದ ಹುಡುಕು:
Search
ಪದ ಹುಡುಕಿದ ವಿವರ:
×
ಪ್ರತಿಕ್ರಿಯೆ / Comments
×
Name
*
:
Phone
*
:
e-Mail:
Place/State/Country
Comment
*
: