Index   ವಚನ - 1562    Search  
 
ಲಿಂಗಕ್ಕೆ ಮನ ಭಾಜನ, ಜಂಗಮಕ್ಕೆ ಧನ ಭಾಜನ, ಪ್ರಸಾದಕ್ಕೆ ತನು ಭಾಜನ. ಈ ತ್ರಿವಿಧಭಾಜನದಲ್ಲಿ ಸಹಭೋಜನವ ಮಾಡುವನು ಕೂಡಲಚೆನ್ನಸಂಗಾ, ನಿಮ್ಮ ಶರಣ ಬಸವಣ್ಣನು.