Index   ವಚನ - 1564    Search  
 
ಲಿಂಗ ಜಂಗಮ ಪ್ರಸಾದವೆಂಬರು, ಲಿಂಗವೆಂದಡೆ ಅಂಗದೊಳಗಾಯಿತ್ತು, ಜಂಗಮವೆಂದಡೆ ಆಸೆಗೊಳಗಾಯಿತ್ತು, ಪ್ರಸಾದವೆಂದಡೆ ವಿಷಯಕ್ಕೊಳಗಾಯಿತ್ತು- ಇಂತೀ ತ್ರಿವಿಧವು ನಷ್ಟ. ಇವರ ಮೇಲಣ ಅಂಕುರಿತವ ಬಲ್ಲ ಜಂಗಮವ ತೋರಾ ಕೂಡಲಚೆನ್ನಸಂಗಮದೇವಾ.