Index   ವಚನ - 1565    Search  
 
ಲಿಂಗಜಂಗಮ ಭಕ್ತಿಯ ಮಾಡಿಸಿಕೊಂಬಲ್ಲಿ ವಿವರವುಂಟು; ಲೌಕಿಕ ಅಲೌಕಿಕ ಸಹಜವೆಂಬ ಮಾಟತ್ರಯವನರಿದು- ಲೌಕಿಕ ಭಕ್ತರಲ್ಲಿ ಅವರಿಚ್ಛೆಯಲ್ಲಿರ್ದು ಭಕ್ತಿಯ ಮಾಡಿಸಿಕೊಂಬುದು. ಅಲೌಕಿಕ ಭಕ್ತರಲ್ಲಿ ತಾ ಕರ್ತನಾಗಿ ಅವರು ಭೃತ್ಯರಾಗಿ ಭಕ್ತಿಯ ಮಾಡಿಸಿಕೊಂಬುದು. ಸಹಜಭಕ್ತರಲ್ಲಿ ಕರ್ತೃತ್ವ ಭೃತ್ಯತ್ವವಿಲ್ಲದೆ ಭಕ್ತಿಯ ಮಾಡಿಸಿಕೊಂಬುದು. ಇಂತಿದು ಲಿಂಗಜಂಗಮದ ಜಾಣಿಕೆ ಕಾಣಿರೆ! ಹೀಗಿಲ್ಲದೆ ಅವರ ಕಾಡಿ ಕರಕರಿಸಿ ಅವರ ಭಂಡು ಮಾಡಿ ತಾ ಭಂಡನಹ ಭಂಡನ ಮುಖವ ತೋರದಿರು ಕೂಡಲಚೆನ್ನಸಂಗಮದೇವಾ.