Index   ವಚನ - 1571    Search  
 
ಲಿಂಗದೇಹಿಯಾದ ಬಳಿಕ ಲಿಂಗೈಕ್ಯನಾಗದನ್ನಕ್ಕ ಲಿಂಗದೇಹಿ ಎಂತಹನೋ ಅಯ್ಯಾ? ಲಿಂಗದೇಹಿಯಾದ ಬಳಿಕ ಲಿಂಗಾಂಗರ ಕೂಡ ಗೋಷ್ಠಿ, ಲಿಂಗಾಂಗರ ಕೂಡ ಸಂಗತಿ, ಲಿಂಗಾಂಗರ ಕೂಡ ಸನ್ನಿಧಿ, ಲಿಂಗಾಂಗರ ಕೂಡ ನಡೆ ನುಡಿ. ಲಿಂಗಾಂಗಿಗಳಲ್ಲದ ಲಿಂಗಹೀನರ ಕೂಡ ಸಂಗವ ಬೆರಸಿ ನಡೆದರೆ ಆತಂಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ ಪಾದತೀರ್ಥ ಪ್ರಸಾದವಿಲ್ಲ ಕಾಣಾ, ಮಹಾದಾನಿ ಕೂಡಲಚೆನ್ನಸಂಗಮದೇವಾ.