Index   ವಚನ - 1576    Search  
 
ಲಿಂಗಭಾಜನದಲ್ಲಿ ಸಹಭೋಜನವ ಮಾಡುವ ಅಜ್ಞಾನಿಗಳು ತಾವೆ ಲಿಂಗವೆಂದೆಂಬರು. ತಾವೆ ಲಿಂಗವಾದಡೆ ಜನನ ಸ್ಥಿತಿ ಮರಣ ರುಜೆ ಸಂಸಾರಬಂಧನವಿಲ್ಲದಿರಬೇಕು. ಮಹಾಜ್ಞಾನವ ಬಲ್ಲೆವೆಂದು, ಲಿಂಗಭಾಜನದಲ್ಲಿ ಸಹಭೋಜನವ ಮಾಡುವ ಪಾತಕರ ಎನಗೊಮ್ಮೆ ತೋರದಿರಾ, ಕೂಡಲಚೆನ್ನಸಂಗಮದೇವಾ.