ಲಿಂಗಮುಖವು ಜಂಗಮವೆಂದುದಾಗಿ,
ತಾನು ಸತ್ಕಾಯಕದಿಂದ ಸಂಪಾದಿಸಿದ
ಸತ್ಪದಾರ್ಥವ ಜಂಗಮಕ್ಕಿತ್ತು
ತತ್ಪ್ರಸಾದವ ಭಕ್ತಿಯಿಂದ ಪಡೆದು
ಸೇವಿಸಬಲ್ಲಡೆ ಅದು ಅಶನವೆಂಬೆ,
ಈ ಕ್ರಮಕ್ಕೆ ಹೊರಗಾದುದೆ ಅನಶನವೆಂಬೆ,
'ಸಾಶನಾನಶನೇ ಅಭಿ' ಎಂದುದಾಗಿ.
ಇಂತೀ ಅಶನ ಅನಶನಗಳ ಭೇದವನರಿಯದೆ
ತನುವ ದಂಡಿಸದೆ ಮನವ ಖಂಡಿಸದೆ,
ತನಗಾಗಿ ಜನವ ಮೋಸಂಗೈದು ತಂದು,
ಮನೆಯಲ್ಲಿ ಮಡಗಿದ ದ್ರವ್ಯವು ಗುರುವಿಂಗೆ ಸಲ್ಲದು,
ಲಿಂಗಕ್ಕೆ ಸಲ್ಲದು, ಜಂಗಮಕ್ಕೆ ಸಲ್ಲದಾಗಿ.
ಇಂತೀ ಬಿನುಗು ಮಾನವನ
ನಮ್ಮ ಕೂಡಲಚೆನ್ನಸಂಗಮದೇವನು
ಹೀನಯೋನಿಯಲ್ಲಿ ಬರಿಸದೆ ಮಾಣ್ಬನೆ?
Art
Manuscript
Music
Courtesy:
Transliteration
Liṅgamukhavu jaṅgamavendudāgi,
tānu satkāyakadinda sampādisida
satpadārthava jaṅgamakkittu
tatprasādava bhaktiyinda paḍedu
sēvisaballaḍe adu aśanavembe,
ī kramakke horagādude anaśanavembe,
'sāśanānaśanē abhi' endudāgi.
Intī aśana anaśanagaḷa bhēdavanariyade
tanuva daṇḍisade manava khaṇḍisade,
tanagāgi janava mōsaṅgaidu tandu,
maneyalli maḍagida dravyavu guruviṅge salladu,
liṅgakke salladu, jaṅgamakke salladāgi.
Intī binugu mānavana
nam'ma kūḍalacennasaṅgamadēvanu
hīnayōniyalli barisade māṇbane?