Index   ವಚನ - 1584    Search  
 
ಲಿಂಗವಂತ ಲಿಂಗಪ್ರಾಣಿ ಸರ್ವಾಂಗಲಿಂಗಿ ಎಂಬಿರಿ. ಭಂಗವಾಯಿತ್ತಲ್ಲಾ ಈ ಮಾತನಾಡಿದಡೆ! ಕೊಂಬುದು ಪಾದೋದಕ ಪ್ರಸಾದ, ಕಳಚುವುದು ಮಲಮೂತ್ರ. ಅಂಗ ಸೋಂಕಿದ ಪಾದೋದಕಕ್ಕೀ ವಿಧಿ ಕೂಡಲಚೆನ್ನಸಂಗಯ್ಯನಲ್ಲಿ ಸಂಗಸುಖದ ಪರಿ ಬೇರೆ.