Index   ವಚನ - 1585    Search  
 
ಲಿಂಗವಿಲ್ಲದ ಜಂಗಮವೆಲ್ಲಿಯದೊ? ಜಂಗಮವಿಲ್ಲದ ಲಿಂಗವೆಲ್ಲಿಯದೊ? ಉರಿಯಿಲ್ಲದ ಅಗ್ನಿ ದಹಿಸಬಹುದೆ? ವಿಷವಿಲ್ಲದ ಸರ್ಪ ಕಡಿಯಬಹುದೆ? ನಿಮ್ಮ ಶರಣರ ಅನುಭಾವವಿಲ್ಲದೆ ಪ್ರಭುದೇವರ ಬೆರಸಬಹುದೆ? ಕೂಡಲಚೆನ್ನಸಂಗಮದೇವಾ.