Index   ವಚನ - 1598    Search  
 
ವಜ್ರವ ಒರಲೆ ಮುಟ್ಟುಬಲ್ಲುದೆ ಅಯ್ಯಾ? ಮದ್ದಿನ ಚೀಲವ ಹಾವು ಮುಟ್ಟಬಲ್ಲುದೆ ಅಯ್ಯಾ? ಕಿಚ್ಚಿದ್ದ ಒಲೆಯಲ್ಲಿ ಶ್ವಾನ ಮಲಗಬಲ್ಲುದೆ ಅಯ್ಯಾ? ಸಮುದ್ರಕ್ಕೆ ಹೋಗಿ ಸಪ್ಪೆಯ ಸಲಿಸುವರೆ ಅಯ್ಯಾ? ಗುರುಲಿಂಗಜಂಗಮವ ಪೂಜಿಸಿ ಬರಿ ಸಾವ ಸಾವರೆ ಊರ ಮುಂದಣ ಹೆಮ್ಮಾರಿಯೆ ಲೇಸೆಂದ ಕೂಡಲಚೆನ್ನಸಂಗಮದೇವ.