Index   ವಚನ - 1597    Search  
 
ಲೋಹ ಪರುಷವ ಮುಟ್ಟುವುದಲ್ಲದೆ, ಪರುಷ ಪರುಷವ ಮುಟ್ಟುವುದೆ ಅಯ್ಯಾ? ಅಂಗವಿಡಿದಂಗೆ ಪ್ರಸಾದವಲ್ಲದೆ ಲಿಂಗವಿಡಿದಂಗೆ ಪ್ರಸಾದವುಂಟೆ? 'ಅಣೋರಣೀಯಾನ್ ಮಹತೋ ಮಹೀಯಾನ್' ಎಂದುದಾಗಿ ಕಿರಿದಿಂಗೆ ಕಿರಿದು ಹಿರಿದಕ್ಕೆ ಹಿರಿದು, ವಾಙ್ಮನಕ್ಕಗೋಚರ. ಕೂಡಲಚೆನ್ನಸಂಗಮದೇವ ಕೇಳಯ್ಯಾ ಸ್ವರೂಪು ಪ್ರಸಾದಿ, ನಿರೂಪು ಲಿಂಗೈಕ್ಯ.