Index   ವಚನ - 1601    Search  
 
ವಾಙ್ಮನಕ್ಕೆ ಗೋಚರ ಲಿಂಗ, ಅಗೋಚರ ಶರಣ. ಸಕಾಯ ಲಿಂಗ, ಅಕಾಯ ಶರಣ. ಆದಿ ಲಿಂಗ, ಅನಾದಿ ಶರಣ. ಪೂರ್ವಿಕ ಲಿಂಗ, ಅಪೂರ್ವಿಕ ಶರಣ. ಇದು ಕಾರಣ- ಕೂಡಲಚೆನ್ನಸಂಗಯ್ಯನಲ್ಲಿ ಅಚ್ಚಲಿಂಗೈಕ್ಯ ಕಾಣಾ ಪ್ರಭುದೇವರು.