Index   ವಚನ - 1609    Search  
 
ವೀರಶೈವನಾದಡೆ ಪರಧನವ ಪರಸತಿಯರ ಮುಟ್ಟದಿರಬೇಕು. ಎಂತೂ ಪರಹಿಂಸೆಯನೆಸಗದಿರಬೇಕು. ಒಡಲಳಿದಡೆಯೂ ಹಿಡಿದಾಚಾರವ ಬಿಡದಿರಬೇಕು. ಇಂತೀ ವೀರಾಚಾರವು ನೆಲೆಗೊಳ್ಳದೆ, ವೀರವಂಶದಲ್ಲಿ ಹುಟ್ಟಿದ ಮಾತ್ರಕ್ಕೆ ವೀರಶೈವನೆಂತಪ್ಪನಯ್ಯಾ ಕೂಡಲಚೆನ್ನಸಂಗಮದೇವಾ?