Index   ವಚನ - 1616    Search  
 
ವೇದ ವೇದಾಂತವನೋದಿ ಜ್ಞಾನ ಸೂರೆಯ ಮಾಡುವ ಜಂಗಮ ಕ್ರಿಯಾಹೀನನಾದಡೆ ಆಗಮಸಮರಸ ಆತನಲ್ಲ. ಅದೇನು ಕಾರಣವೆಂದಡೆ: ನುಡಿದಂತೆ ನಡೆಯನು. ಅಲ್ಲಿ ಕೂಡಲಚೆನ್ನಸಂಗಮದೇವ ನಿಲ್ಲಲಾರನು ಸಿದ್ಧರಾಮಯ್ಯಾ.