ವೇದ ಶಾಸ್ತ್ರ ಪುರಾಣಾಗಮಂಗಳಲ್ಲಿ ತಾನೆ ಪ್ರಸಿದ್ಧವಾಗಿ,
ಕೊಂಡಾಡಿಸಿಕೊಳ್ಳಲ್ಪಟ್ಟ
ಶ್ರೀ ಮಹಾಭಸಿತವ ಧರಿಸಿದಾತನೆ ಸದ್ಬ್ರಾಹ್ಮಣ.
ಇಂತಪ್ಪ ಮಹಾಭಸಿತವ ಬಿಟ್ಟು ಅಜ್ಞಾನಮತದಿಂದ
ವೇದ ಶಾಸ್ತ್ರಾಗಮಪುರಾಣಂಗಳಲ್ಲಿ ವಿರುದ್ಧವಾದ
ಮಟ್ಟಿಮಸಿಗಳ ಹಣೆಯಲ್ಲಿಟ್ಟುಕೊಂಡನಾದಡೆ,
ಅವನು ಬ್ರಾಹ್ಮಣನಲ್ಲ, ಅವನು ಪಂಚಮಹಾಪಾತಕ,
ಆತ ಶ್ವಪಚನೆಂದು ಪುರಾಣಪ್ರಸಿದ್ಧ.
ಅದೆಂತೆಂದಡೆ, ಗರುಡಪುರಾಣದಲ್ಲಿ:
"ಶ್ರುತಯಃ ಸ್ಮೃತಯಸ್ಸರ್ವೇ ಪುರಾಣಾನ್ಯಖಿಲಾನಿ ಚ
ವದಂತಿ ಭೂತಿಮಹಾತ್ಮ್ಯಂ ತತಸ್ತಂ ಧಾರಯೇದ್ದ್ವಿಜಃ
ತದಭಾವೇ ತದಾ ವಿಪ್ರೋ ಅಹಿತಾಗ್ನಿಂ ಸಮಾಹರೇತ್
ಭಸ್ಮನೈವ ಪ್ರಕುರ್ವೀತ ನ ಕುರ್ಯಾನ್ಮೃತ್ತಿಕಾದಿಭಿಃ
ಗೋಪೀಚಂದನಧಾರೀ ತು ಶಿವಂ ಸ್ಪೃಶತಿ ಯೋ ದ್ವಿಜಃ
ಶತೈಕವಿಂಶತಿಕುಲಂ ಸೋsಕ್ಷಯಂ ನರಕಂ ವ್ರಜೇತ್"
ಮತ್ತಂ ಕೂರ್ಮಪುರಾಣದಲ್ಲಿ:
"ತ್ರಿಪುಂಡ್ರಂ ಬ್ರಾಹ್ಮಣೋ ವಿದ್ವಾನ್ ಮನಸಾsಪಿ ಲಂಘಯೇತ್
ಶ್ರುತ್ಯಾ ವಿಧೀಯತೇ ತಸ್ಮಾತ್ತ್ಯಾಗೀ ತು ಪತಿತೋ ಭವೇತ್"
ಎಂದುದಾಗಿ, ನಮ್ಮ ಕೂಡಲಚೆನ್ನಸಂಗಮದೇವರಲ್ಲಿ,
ಶ್ರುತಿಸ್ಮೃತಿ ಪ್ರಸಿದ್ಧವಾದ
ಶ್ರೀಮಹಾವಿಭೂತಿಯನಿಟ್ಟಾತನೆ ಸದ್ಬ್ರಾಹ್ಮಣ.
ಈ ಮಹಾವಿಭೂತಿಯ ಬಿಟ್ಟು
ಮಣ್ಣು ಮಸಿ ಮರದ ರಸಂಗಳ
ಹಣೆಯಲ್ಲಿ ಬರೆದುಕೊಂಡನಾದಡೆ
ಆವ ವಿಪ್ರನಲ್ಲ; ಆವ ಪಾಪಿ, ಶುದ್ಧ ಶ್ವಪಚ ಕಾಣಿಭೋ.
Art
Manuscript
Music
Courtesy:
Transliteration
Vēda śāstra purāṇāgamaṅgaḷalli tāne prasid'dhavāgi,
koṇḍāḍisikoḷḷalpaṭṭa
śrī mahābhasitava dharisidātane sadbrāhmaṇa.
Intappa mahābhasitava biṭṭu ajñānamatadinda
vēda śāstrāgamapurāṇaṅgaḷalli virud'dhavāda
maṭṭimasigaḷa haṇeyalliṭṭukoṇḍanādaḍe,
avanu brāhmaṇanalla, avanu pan̄camahāpātaka,
āta śvapacanendu purāṇaprasid'dha.
Adentendaḍe, garuḍapurāṇadalli:
Śrutayaḥ smr̥tayas'sarvē purāṇān'yakhilāni ca
vadanti bhūtimahātmyaṁ tatastaṁ dhārayēddvijaḥ
tadabhāvē tadā viprō ahitāgniṁ samāharēt
Bhasmanaiva prakurvīta na kuryānmr̥ttikādibhiḥ
gōpīcandanadhārī tu śivaṁ spr̥śati yō dvijaḥ
śataikavinśatikulaṁ sōskṣayaṁ narakaṁ vrajēt
mattaṁ kūrmapurāṇadalli:
Tripuṇḍraṁ brāhmaṇō vidvān manasāspi laṅghayēt
śrutyā vidhīyatē tasmāttyāgī tu patitō bhavēt
endudāgi, nam'ma kūḍalacennasaṅgamadēvaralli,
śrutismr̥ti prasid'dhavāda
śrīmahāvibhūtiyaniṭṭātane sadbrāhmaṇa.
Ī mahāvibhūtiya biṭṭu
maṇṇu masi marada rasaṅgaḷa
haṇeyalli baredukoṇḍanādaḍe
āva vipranalla; āva pāpi, śud'dha śvapaca kāṇibhō.