Index   ವಚನ - 1637    Search  
 
ಶಿವನ ಪಾದೋದಕವನಲ್ಲದೆ ಕೊಳ್ಳಲಾಗದೆಂದುದು ವೇದ. ಶಿವನ ಪ್ರಸಾದವನಲ್ಲದೆ ಉಣಲಾಗದೆಂದುದು ವೇದ. ಜಾಬಾಲಶಿಖಾಯಾಂ: "ರುದ್ರೇಣಾತ್ತಮಶ್ನಂತಿ ರುದ್ರೇಣ ಪೀತಂ ಪಿಬಂತಿ ರುದ್ರೇಣ ಘ್ರಾತಂ ಜಿಘ್ರಂತಿ ತಸ್ಮಾತ್ ಬ್ರಾಹ್ಮಣೋ ವಿದ್ವಾನ್ ನಿರ್ಮಾಲ್ಯಮೇವ ಭಕ್ಷಯೇತ್ ನಿರ್ಮಾಲ್ಯಮೇವ ನಿಷೇವಯೇತ್" ಇದನರಿದು, ಶಿವನ ಪಾದೋದಕ ಪ್ರಸಾದವ ಕೊಂಬಾತನೆ ಸದ್ಬ್ರಾಹ್ಮಣ, ಆತನೆ ವಿದ್ವಾಂಸನು, ಆತನೆ ಎಲ್ಲವನು ಬಲ್ಲ ಸರ್ವಜ್ಞನಯ್ಯಾ, ಆತನೆ ಸದ್ಭಕ್ತನು ಕೂಡಲಚೆನ್ನಸಂಗಮದೇವಾ.