Index   ವಚನ - 1652    Search  
 
ಶಿವಚಾರವೆ ಅಂಗ, ಶಿವಭಕ್ತಿಯೆ ಅಂಗ, ಶಿವಶರಣರ ನಿಷ್ಠೆಯ ಅಂಗ. ಅಂಗಲಿಂಗಸಂಗವೆಂದೂ ಹಿಂಗದುದು ಸದಂಗ. ಆವ ಪದಾರ್ಥವಾದಡೇನು? ತನ್ನ ನೇಮಿಸಿ ಬಂದುದ ಸಕಲೇಂದ್ರಿಯಂಗಳ ಹೊದ್ದಲೀಯದೆ ಭಾವಮುಖದಲ್ಲಿಯೆ ಸಂಧಿಸಿ, ಕೂಡಲಚೆನ್ನಸಂಗಯ್ಯಂಗರ್ಪಿಸಿ ಕೊಳಬಲ್ಲಡೆ ಅದೆ ಅಂಗಲಿಂಗಸಂಯೋಗ.