Index   ವಚನ - 1662    Search  
 
ಶುದ್ಧ, ಸಿದ್ಧ, ಪ್ರಸಿದ್ಧದ ವಿವರವ ಕೇಳಿದಡೆ ಹೇಳುವೆನು: ವಿಶ್ವ ಮುಟ್ಟಿತ್ತು ಶುದ್ಧ, ತೈಜಸ ಮುಟ್ಟಿತ್ತು ಸಿದ್ಧ, ಪ್ರಾಜ್ಞ ಮುಟ್ಟಿತ್ತು ಪ್ರಸಿದ್ಧ. ಪ್ರತ್ಯಗಾತ್ಮನಲ್ಲಿ ಪರಿಣಾಮಿ, ಕೂಡಲಚೆನ್ನಸಂಗಾ, ನಿಮ್ಮ ಶರಣ.