Index   ವಚನ - 1661    Search  
 
ಶುದ್ಧ ಸಿದ್ಧ ಪ್ರಸಿದ್ಧದ ಭೇದಾಭೇದ ಸೂಕ್ಷ್ಮವಂ ಪೇಳ್ವೆ: ಭಕ್ತ ಲಿಂಗಾರ್ಚನೆಯಂ ಮಾಡುತ್ತಿರಲು ಮಠದಲ್ಲಿ ಪದಾರ್ಥ ಹೆಚ್ಚಿರಲು ಆ ಸಮಯದಲ್ಲಿ ಒಡೆಯರು ಬಿಜಯಂಗೈಯಲು ತಾನು ಕೊಂಡುದೆ ಪ್ರಸಾದ, ನಿಂದುದೆ ಪದಾರ್ಥವಾಗಿ ನೀಡಬಹುದಯ್ಯಾ. ಬಹುದು ಬಾರದೆಂಬ ಸಂದೇಹಮಂ ತಾಳ್ದಡೆ ಲಿಂಗಕ್ಕೆ ದೂರ, ಜಂಗಮಕ್ಕೆ ಸಲ್ಲನಯ್ಯಾ. ಅದು ಶುದ್ಧ ಮುಖದಿಂದ ಬಂದುದು ಪ್ರಸಿದ್ಧ ಮುಖಕ್ಕೆ ನೀಡಬಹುದಾಗಿ ಸಂದೇಹಮಂ ತಾಳಲಾಗದು ಕೂಡಲಚೆನ್ನಸಂಗಮದೇವ.