Index   ವಚನ - 1681    Search  
 
ಶ್ರೋತ್ರಾದಿ ಜ್ಞಾನೇಂದ್ರಿಯಂಗಳು, ಇವಕ್ಕೆ ವಿವರ: ಶ್ರೋತ್ರವು ಸ್ವರ ಶಬ್ದ ನಾದಂಗಳಂ ಬಲ್ಲುದು, ನೇತ್ರಂಗಳು ಸಪ್ತವರ್ಣಂಗಳಂ ಕಂಡು ಸುಖಿಸಬಲ್ಲವು, ಘ್ರಾಣವು ಗಂಧ ದುರ್ಗಂಧಂಗಳಂ ಬಲ್ಲುದು, ಜಿಹ್ವೆ ಮಧುರ ಆಮ್ಲ ತಿಕ್ತ ಕಟು ಕಷಾಯವಂ ಬಲ್ಲುದು, ತ್ವಕ್ಕು ಸ್ಪರ್ಶವ ಮೃದು ಕಠಿಣ ಶೀತೋಷ್ಣವಂ ಬಲ್ಲುದು, ಇಂತೀ ಜ್ಞಾನೇಂದ್ರಿಯಂಗಳ ಸಂಚಲನವರಿದು ನಿಜ ಉಳಿಯ ಬಲ್ಲಡೆ ಕೂಡಲಚೆನ್ನಸಂಗಯ್ಯನಲ್ಲಿ ಶರಣನೆನಿಸುವನು.