Index   ವಚನ - 1682    Search  
 
ಷೋಡಶಕಳೆಯುಳ್ಳ ಜಂಗಮವ ರಾಜರುಗಳು ಪೂಜೆಯ ಮಾಡುವರು. ವಿಷಯವುಳ್ಳ ಜಂಗಮವ ವೇಸಿ ಪೂಜೆಯ ಮಾಡುವಳು. ರಸವಿದ್ಯೆಯುಳ್ಳ ಜಂಗಮವ ಅಕ್ಕಸಾಲೆ ಪೂಜೆಯ ಮಾಡುವನು. ವೇಷವುಳ್ಳ ಜಂಗಮವ ಭಕ್ತರು ಪೂಜೆ ಮಾಡುವರು. ಜ್ಞಾನವುಳ್ಳ ಜಂಗಮವ ಆರಿಗೂ ಕಾಣಬಾರದು, ಕೂಡಲಚೆನ್ನಸಂಗಮದೇವಾ.