ಸಕಲ-ನಿಷ್ಕಲ, ರೂಪು-ನಿರೂಪು,
ಮಾಯಾ-ನಿರ್ಮಾಯ, ಕಾರಣ-ಅಕಾರಣ,
ದೇಹ-ನಿರ್ದೇಹದಲ್ಲಿ ಅವಧಾನಿಯಾಗಿ,
ಸವಾಯ-ನಿರ್ವಾಯ, ಸಂಕಲ್ಪ-ವಿಕಲ್ಪ,
ಸಂಯೋಗ-ವಿಯೋಗ, ಪುಣ್ಯ-ಪಾಪ,
ಧರ್ಮ-ಅಧರ್ಮಂಗಳೆಂಬ
ಕಾಲ-ವೇಳೆಯಿಂದ ನಿರತನಾಗಿ,
ಇಂತೀ ದ್ವಯ ಸಂಪಾದನೆಗಳ ಸಂಪಾದಿಸದೆ
ಕೂಡಲಚೆನ್ನಸಂಗಯ್ಯನ
ಶರಣರ ಕಾರುಣ್ಯಮಂ ಪಡೆವುದು.
Art
Manuscript
Music
Courtesy:
Transliteration
Sakala-niṣkala, rūpu-nirūpu,
māyā-nirmāya, kāraṇa-akāraṇa,
dēha-nirdēhadalli avadhāniyāgi,
savāya-nirvāya, saṅkalpa-vikalpa,
sanyōga-viyōga, puṇya-pāpa,
dharma-adharmaṅgaḷemba
kāla-vēḷeyinda niratanāgi,
intī dvaya sampādanegaḷa sampādisade
kūḍalacennasaṅgayyana
śaraṇara kāruṇyamaṁ paḍevudu.