Index   ವಚನ - 1687    Search  
 
ಸಕಲ ಪ್ರಾಣಿಗಳಿಗೆ ಲೇಸಾಗಲೆಂದು ಮಜ್ಜನಕ್ಕೆರೆವ ಲಾಂಛನಧಾರಿಯ ವೇಷಕ್ಕೆ ಶರಣೆಂಬೆ, ಲಾಂಛನದ ಹೆಚ್ಚು-ಕುಂದನರಸೆ. ಸಕಲ ಪದಾರ್ಥವ ತಂದು ಜಂಗಮಕ್ಕೆ ನೀಡುವೆ ಭಕ್ತಿಯಿಂದ. ಮನೆಗೆ ಬಂದಡೆ ಪರಿಣಾಮವ ಕೊಡುವೆ, ಆತನಿದ್ದೆಡೆಗೆ ಹೋಗೆ. ಕೂಡಲಚೆನ್ನಸಂಗಯ್ಯನಲ್ಲಿ ಅನುವಿಲ್ಲಾಗಿ ಮುನಿದುದಿಲ್ಲ.