ಸಮಯವಿರೋಧವಾದೀತೆಂದು
ಪಾದಾರ್ಚನೆಯ ಮಾಡುವರಯ್ಯಾ.
ಲಿಂಗಜಂಗಮಕ್ಕೆ ಪಾದವಾವುದು? ಅರ್ಚನೆ ಯಾವುದು?
ಎಂಬ ತುದಿ ಮೊದಲನರಿಯರು.
ಉದಾಸೀನದಿಂದ ಪಾದಾರ್ಚನೆಯ ಮಾಡಿ,
ಪಾದೋದಕ ಧರಿಸಿದಡೆ ಅದೇ ಪ್ರಳಯಕಾಲಜಲ.
ವರ್ಮವನರಿದು ಕೊಂಡಡೆ ತನ್ನ ಭವಕ್ಕೆ ಪ್ರಳಯಕಾಲಜಲ!
ಈ ಉಭಯವ ಭೇದಿಸಿ ಸಂಸಾರಮಲಿನವ ತೊಳೆವಡೆ
ಕೂಡಲಚೆನ್ನಸಂಗಾ
ಈ ಅನುವ ನಿಮ್ಮ ಶರಣ ಬಲ್ಲ.