Index   ವಚನ - 1714    Search  
 
ಸೀಮೆ ನೇಮಂಗಳ ಹೊದ್ದದ ನಿಜವೀರಶೈವದೀಕ್ಷೆಯನು ಗುರು ತನ್ನ ಶಿಷ್ಯಂಗಿತ್ತು, ಮತ್ತೆ ಆ ಶಿಷ್ಯನ ನೇಮಸ್ಥನ ಮಾಡಿದಲ್ಲಿ, ಆ ನಿಜದೀಕ್ಷೆಗೆಟ್ಟು ಆ ಗುರುಶಿಷ್ಯರೀರ್ವರೂ ಪತಿತರಾಗಿ ಶ್ವಾನಯೋನಿಯಲ್ಲಿ ಶತಸಹಸ್ರವೇಳೆ ಬಂದು, ನರಕವಿಪ್ಪತ್ತೆಂಟುಕೋಟಿಯನೈದುವರು. ಅದೆಂತೆಂದಡೆ: "ನೇಮಸ್ಥಂ ಚನ ದೀಕ್ಷಯಾದೀ ಶ್ವಾನಜನ್ಮಸು ಜಾಯತೇ ಅಷ್ಟವಿಂಶತಿಕೋಟ್ಯಸ್ತು ನರಕಂ ಯಾಂತಿ ಧ್ರುವಂ" ಎಂದುದಾಗಿ, ನಿಜಗೆಟ್ಟು ಪತಿತರಾಗಿ ನರಕಕ್ಕಿಳಿವ ಪಾತಕರನೆನಗೆ ತೋರದಿರಾ ಕೂಡಲಚೆನ್ನಸಂಗಯ್ಯಾ.