Index   ವಚನ - 1715    Search  
 
ಸುಖವನರಿಯದ ಕಾರಣ ಹೆಂಗಸು ಸೂಳೆಯಾದಳು. ಲಿಂಗವನರಿಯದ ಕಾರಣ ಭಕ್ತ ಶೀಲವಂತನಾದ. ಈ ಉಭಯ ಕುಲಸ್ಥಲದರಿವು ನಿಷ್ಪತ್ತಿಯಾಗದನ್ನಕ್ಕರ ಕೂಡಲಚೆನ್ನಸಂಗಮದೇವನೆಂತೊಲಿವನಯ್ಯಾ.