ಸುಟ್ಟು ಶುದ್ಧವಾದ ಬಳಿಕ ಮತ್ತೆ ಸುಡಲಿಕೆಲ್ಲಿಯದೊ?
ಅಟ್ಟು ಪಾಕವಾದ ಬಳಿಕ ಮತ್ತೆ ಅಡಲೆಲ್ಲಿಯದೊ?
ಇನ್ನು ಶುದ್ಧ ಮಾಡಿಹೆನೆಂಬ ವಿಧಿಯ ನೋಡಾ.
ಶ್ರುತಿ:
"ದಗ್ಧಸ್ಯ ದಹನಂ ನಾಸ್ತಿ ಪಕ್ವಸ್ಯ ಪಚನಂ ಯಥಾ|
ಜ್ಞಾನಾಗ್ನಿ ದಗ್ಧದೇಹಸ್ಯ ನಚ ಶ್ರಾದ್ಧಂ ನ ಚ ಕ್ರಿಯಾ"||
ಇದುಕಾರಣ, ಕೂಡಲಚೆನ್ನಸಂಗಯ್ಯಾ
ನಂಬಿಯೂ ನಂಬದಿದ್ದಡೆ ನ ಭವಿಷ್ಯತಿ.