Index   ವಚನ - 1718    Search  
 
ಸುರೆಯ ತೊರೆ, ಮಾಂಸದ ಒಟ್ಟಿಲು, ಭಂಗಿಯ ಬಣಬೆ, ಜಾಯಿಕಾಯಿ ಜಾಯಿಪತ್ರೆಯ ತಿಂಬ ಹಿರಿಯರ, ಹರಿಕಾರರ ಜಂಗಮವೆಂದಡೆ ನಾಯಕನರಕ ತಪ್ಪದು ಕೂಡಲಚೆನ್ನಸಂಗಮದೇವಾ.