Index   ವಚನ - 1749    Search  
 
ಹೂ-ಮಿಡಿಯ ಹರಿದು ಹಣ್ಣ ಮಾಡಿಹೆನೆಂದಡೆ ಫಲಕಾರ್ಯಂಗಳಪ್ಪುವೆ ದೇವಾ? ಶಶಿಧರನಟ್ಟಿದ ಬೆಸನದೊಳಗೆ ಎವೆ ಮಾತ್ರ ಪ್ರಮಾಣವೆ ಪೂರೈಸಲು? ಲಿಂಗಪ್ರಾಣ ಪ್ರಾಣಲಿಂಗದ ಭೇದವ ನೆಟ್ಟನೆ ತಿಳಿದಲ್ಲದೆ, ಸಂಗಮನಾಥ `ನೀ ಬಾರಾ' ಎಂದು ಎತ್ತಕೊಳ್ಳನು. ಕೂಡಲಚೆನ್ನಸಂಗಯ್ಯಂಗೆ ಸವೆಯದ ಮುನ್ನ ಸಯವಾಗಲುಂಟೆ? ಹೇಳಾ ಸಂಗನಬಸವಣ್ಣಾ.