Index   ವಚನ - 1759    Search  
 
ಹೊಲೆ ಹೊಲೆ ಎಂದನಯ್ಯಾ ಬಸವಣ್ಣ. ಹೊಲೆ ಹುಟ್ಟಿದ ಮೂರು ದಿನಕ್ಕೆ ಪಿಂಡಕ್ಕೆ ನೆಲೆಯಾಯಿತ್ತು. ನರರಿಗೆ ಹೊಲೆ, ಸುರರಿಗೆ ಹೊಲೆ, ಹರಿಬ್ರಹ್ಮಾದಿಗಳಿಗೆ ಹೊಲೆ. ಇಂತೀ ಹೊಲೆಯಲ್ಲಿ ಹುಟ್ಟಿ, ಹೊಲೆಯನತಿಗಳೆದೆನೆಂಬ ಉಭಯಭ್ರಷ್ಟರ ಮುಖವ ನೋಡಲಾಗದು- ಕೂಡಲಚೆನ್ನಸಂಗಮದೇವಾ.