Index   ವಚನ - 1760    Search  
 
ಹೊಲೆಯ ಹೊಲೆಯನೆಂದು ಹೊರಗಿರು ಎಂದೆಂಬರು ಹೊಲೆಯನೆಂತವನಯ್ಯಾ? ತನ್ನ ಹೊಲೆಯ ತಾನರಿಯದೆ ಮುನ್ನಿನವರ ಹೊಲೆಯನರಸುವ ಭ್ರಷ್ಟರಿಗೆ ಏನೆಂಬೆನಯ್ಯಾ, ಮಹಾದಾನಿ ಕೂಡಲ ಚೆನ್ನಸಂಗಮದೇವಾ.