ಪ್ರಸಾದವ ಕೊಂಡ ಶರಣನ ಸರ್ವಾಂಗವೆಲ್ಲ ಪ್ರಸಾದ.
ಆತ ಘ್ರಾಣಿಸಿದ್ದು ಆಚಾರಲಿಂಗಪ್ರಸಾದ.
ಆತ ರುಚಿಸಿದ್ದೆಲ್ಲ ಗುರುಲಿಂಗಪ್ರಸಾದ.
ಆತ ನೋಡಿದ್ದೆಲ್ಲ ಶಿವಲಿಂಗಪ್ರಸಾದ.
ಆತ ಸ್ಪರ್ಶನಮಾಡಿದ್ದೆಲ್ಲ ಜಂಗಮಲಿಂಗಪ್ರಸಾದ.
ಆತ ಕೇಳಿದ್ದೆಲ್ಲ ಪ್ರಸಾದಲಿಂಗಪ್ರಸಾದ.
ಆತನ ಸರ್ವೇಂದ್ರಿಯವೆಲ್ಲ ಪರಿಪೂರ್ಣವಾದದ್ದೆಲ್ಲ
ಮಹಾಲಿಂಗಪ್ರಸಾದ.
ಇಂತೀ ಪ್ರಸಾದವೆಲ್ಲವ ಕೊಂಡ ಸರ್ವಾಂಗಪ್ರಸಾದಿ
ನಿಮ್ಮ ಶರಣ, ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.