Index   ವಚನ - 34    Search  
 
ಪ್ರಸಾದ ಪ್ರಸಾದವೆಂದು ನುಡಿವಿರಿ; ಎಲ್ಲರಿಗೆಲ್ಲಿಹದೊ ಪ್ರಸಾದ? ಈ ಪ್ರಸಾದದ ಭೇದವ ಬಲ್ಲರೆ ಚನ್ನಬಸವಣ್ಣ. ಈ ಪ್ರಸಾದದ ಭೇದವ ಬಲ್ಲರೆ ಬಸವಣ್ಣ. ಈ ಪ್ರಸಾದದ ಭೇದವ ಬಲ್ಲರೆ ಪ್ರಭುದೇವರು. ಈ ಪ್ರಸಾದದ ಭೇದವ ಬಲ್ಲರೆ ಮರುಳಶಂಕರದೇವ ಸಿದ್ಧರಾಮ ಅಜಗಣ್ಣ ಮುಕ್ತಾಂಗನೆ ಅಕ್ಕಮಹಾದೇವಿ. ಮಿಕ್ಕಿನ ಜಡಜೀವಜಾಳುಗಳಿಗೆಲ್ಲಿಹದೊ ಪ್ರಸಾದ? ಗಡಿಗೆಯೊಳಗಿದ್ದಾಗ ಬೋನ, ಹರಿವಾಣಕ್ಕೆ ಬಂದಾಗ ನೈವೇದ್ಯ, ಜಂಗಮ ಮುಟ್ಟಿ ಗ್ರಹಿಸಿದಾಗಳೆ ಪ್ರಸಾದವೆಂದು ಕೊಂಡು, ತಮ್ಮ ಉದರಕ್ಕೆ ಹೊಂದಿದಲ್ಲಿಯೆ ದುರ್ಗಂಧವಾಯಿತ್ತೆಂದು, ಜಲ ಮಲವ ಬಿಟ್ಟುಬಂದೆವು ಹೊರಗಗ್ಘಣಿಯ ತನ್ನಿಯೆಂಬ ಹೊಲೆಮಾದಿಗರ ಮೂಗ ಕೊಯ್ದು, ನಿಂಬೆಹುಳಿಯ ಹಿಂಡದೆ ಮಾಣ್ಬನೆ [ನಿಮ್ಮ ಶರಣ] ಚನ್ನಯ್ಯಪ್ರಿಯ ನಿರ್ಮಾಯಪ್ರಭುವೆ?