Index   ವಚನ - 9    Search  
 
ಬ್ರಹ್ಮ ವಿಷ್ಣುಗಳಿಲ್ಲದಂದು, ರುದ್ರ ಈಶ್ವರ ಇಲ್ಲದಂದು, ಸದಾಶಿವ ಪರಶಿವ ಇಲ್ಲದಂದು, ಚಿಲ್ಲಿಂಗ ಚಿದಾನಂದಲಿಂಗವಿಲ್ಲದಂದು, ಚಿನ್ಮಯಲಿಂಗ ಚಿತ್ಪ್ರಕಾಶಲಿಂಗವಿಲ್ಲದಂದು, ಇವೇನೇನೂ ಇಲ್ಲದಂದು, ನಿಷ್ಕಲಲಿಂಗ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.