Index   ವಚನ - 11    Search  
 
ಪರಮಚಿತ್ಕಲೆಯಲ್ಲಿ ಪರಿಣಾಮವನೆಯ್ದಿದ ಮಹಾಶರಣನು, ಅವಿರಳಸ್ವಾನುಭಾವಸಿದ್ಧಾಂತವನರಿತು, ಅಲ್ಲಿಂದತ್ತತ್ತ ಪರಮಜ್ಞಾನ ಮಹಾಘನ ಅಗಮ್ಯ ಅಗೋಚರ ಅಪ್ರಮಾಣ ನಿರಾಕುಳ ನಿಜಂಜನ ನಿರ್ಭರಿತ ನಿಃಶೂನ್ಯ ನಿರಪೇಕ್ಷ ನಿಷ್ಕಲಲಿಂಗ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.