Index   ವಚನ - 26    Search  
 
ನಿತ್ಯನಿರಾಳದಲ್ಲಿ ಪರಿಪೂರ್ಣವನೈದಿದ ಮಹಾಶರಣಂಗೆ ಇಹಲೋಕವೆಂದಡೇನಯ್ಯ? ಪರಲೋಕವೆಂದಡೇನಯ್ಯಾ? ಇಹಪರಗಳಿಂದತ್ತತ್ತ ಅಪರಂಪರ ಮಹಾಘನ ಚಿತ್ಪ್ರಕಾಶಲಿಂಗ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.