ಚಿತ್ಪ್ರಕಾಶಲಿಂಗದಲ್ಲಿ ಚಿದಾನಂದವಾದ ಶರಣನು
ಅನಂತಕೋಟಿ ಬ್ರಹ್ಮರ, ಅನಂತ ಕೋಟಿ ವಿಷ್ಣುಗಳ,
ಅನಂತಕೋಟಿ ರುದ್ರರ ಗರ್ಭೀಕರಿಸಿಕೊಂಡು
ನಿಶ್ಚಿಂತ ನಿರಾಕುಳವೆಂಬ ಸಿಂಹಾಸನದಲ್ಲಿ ನಿಂದು
ಪರಕೆ ಪರವನೈದಿದನಯ್ಯಾ,
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Citprakāśaliṅgadalli cidānandavāda śaraṇanu
anantakōṭi brahmara, ananta kōṭi viṣṇugaḷa,
anantakōṭi rudrara garbhīkarisikoṇḍu
niścinta nirākuḷavemba sinhāsanadalli nindu
parake paravanaididanayyā,
jhēṅkāra nijaliṅgaprabhuve.